ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live ರಾಜಕಾರಣ| ನೇಕಾರರ ₹100 ಕೋಟಿ ಸಾಲ ಸಂಪೂರ್ಣ ಮನ್ನ: ಯಡಿಯೂರಪ್ಪ

Last Updated 26 ಜುಲೈ 2019, 14:26 IST
ಅಕ್ಷರ ಗಾತ್ರ

ಸಮ್ಮಿಶ್ರ ಸರ್ಕಾರ ಪತನದ ನಂತರಬಿ.ಎಸ್‌.ಯಡಿಯೂರಪ್ಪ ಅವರು 4ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಕ್ಷಣಕ್ಷಣದ ಮಾಹಿತಿ ಇಲ್ಲಿ ಸಿಗಲಿದೆ...

7.50–ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾಗೋಷ್ಠಿ

ನನಗೆ ಮುಖ್ಯಮಂತ್ರಿ ಸ್ಥಾನ ದೊರೆತಿದ್ದು, ರಾಜ್ಯದ ಜನರಿಗೆ ಸಂದ ಗೌರವ. ಇನ್ನು ನಾಲ್ಕು ತಿಂಗಳಲ್ಲಿಯೇ, ನಮ್ಮ ಸರ್ಕಾರಕ್ಕೂ 14 ತಿಂಗಳ ಸರ್ಕಾರಕ್ಕೂ ಇರುವ ವ್ಯತ್ಯಸವನ್ನು ನಾವು ತೋರಿಸಬೇಕಿದೆ. ಆಡಳಿತ ಯಂತ್ರ ಕುಸಿದಿದೆ. ಮೊದಲು ಅದನ್ನು ಸರಿಪಡಿಸಬೇಕಿದೆ. ಯಾವುದೇ ಕಾರಣಕ್ಕೂ ಸೇಡಿನ ರಾಜಕಾರಣ ಮಾಡುವುದಿಲ್ಲ. ಯಾರೇ ನನ್ನನ್ನು ದ್ವೇಷಿಸಿದರು ಅವನ್ನು ಪ್ರೀತಿಯಿಂದ ಕಾಣುತ್ತೇನೆ.

ಜನರ ಆಶಿರ್ವಾದ, ನೆಚ್ಚಿನ ಕಾರ್ಯಕರ್ತರ ಶ್ರಮ, ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಆಶೀರ್ವಾದಿಂದ ನಾನು ಈ ಸ್ಥಾನಕ್ಕೆ ಬಂದಿದ್ದೇನೆ. ಮೊದಲ ಆದ್ಯತೆ ರೈತ, ನೇಕಾರ, ಮೀನುಗಾರ, ಕೃಷಿ ಕಾರ್ಮಿಕ ಅಭಿವೃದ್ಧಿಗೆ ಶ್ರಮಿಸುವುದು.

ಸಂಪುಟ ಸಭೆಯಲ್ಲಿ ಎರಡು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದೇವೆ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ನೀಡುವ ₹6 ಸಾವಿರದ ಜೊತೆಗೆ ರಾಜ್ಯ ಸರ್ಕಾರದ ₹4 ಸಾವಿರಗಳನ್ನು ಎರಡು ಕಂತುಗಳಲ್ಲಿನೀಡುತ್ತೇವೆ.ನೇಕಾರರ ₹100 ಕೋಟಿ ಸಾಲವನ್ನು ಸಂಪೂರ್ಣ ಮನ್ನ ಮಾಡುವ ಎರಡು ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದೇವೆ.

7.40–ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆಸಿದ ಮೊದಲಸಂಪುಟ ಸಭೆ ಪೂರ್ಣಗೊಂಡಿದೆ.

7.32–ಕುಮಾರಸ್ವಾಮಿ ಸರ್ಕಾರದಲ್ಲಿಅಡ್ವೊಕೇಟ್ ಜನರಲ್ ಆಗಿದ್ದ ಉದಯ್‌ ಹೊಳ್ಳ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ನೀಡಿದರು.

7.13–ಗೃಹಸಚಿವ ಅಮಿತ್‌ ಶಾ ಅವರು ಯಡಿಯೂರಪ್ಪ ಅವರಿಗೆ ಟ್ಟಿಟ್ಟರ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

7.10–ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ನಂತರ ವಿಧಾನಸೌಧಕ್ಕೆ ಭೇಟಿ ನೀಡಿದಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

6.58–ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ಅವರು ರಾಜಭವನದಲ್ಲಿ ಏರ್ಪಡಿಸಿದ್ದ ಔತನಕೂಟದಲ್ಲಿ ಭಾಗಿ.

6.40–ಕರ್ನಾಟಕ ಮುಖ್ಯಮಂತ್ರಿ ಅಧಿಕೃತ ಟ್ವಿಟ್ಟರ್‌ ಖಾತೆ

6.30– ಬೂಕನಕರೆ ಸಿದ್ದಲಿಂಗಪ್ಪಯಡಿಯೂರಪ್ಪ ಆದನಾನು..ದೇವರಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ.

ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದರು. ಉಸ್ತುವಾರಿ ಕಾರ್ಯದರ್ಶಿಮುರಳಿಧರ್‌ ರಾವ್‌ ಹೊರತುಪಡಿಸಿ ಕೇಂದ್ರದ ಸಚಿವರು ಯಾರೂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಯಾರೂ ಭಾಗಿಯಾಗಿಲ್ಲ.

6.25–ರಾಜಭವನದ ಒಳಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತಿದ್ದು, ಹೊರಗಡೆ ಪೊಲೀಸರು ಹಾಗೂ ಮಹಿಳೆ ನಡುವೆ ಜಟಾಪಟಿ ನಡೆಯುತ್ತಿದೆ‌.

ಪಾಸ್ ಇದ್ದರೂ ಒಳಗಡೆ ಬಿಡಲು ಪೊಲೀಸರು ನಿರಾಕರಿಸಿದ್ದಕ್ಕಾಗಿ ಮಹಿಳೆಯರು ಜಗಳ ತೆಗೆದರು. ಇದೇ ವೇಳೆ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆಗ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು, ಜೀಪು ಹತ್ತಿಸಿದರು.
ಜೀಪಿನಿಂದ ಕೆಳಗೆ ಇಳಿಸುವಂತೆ ಮಹಿಳೆ ಪಟ್ಟು ಹಿಡಿದರು. ಸ್ಥಳದಲ್ಲಿ ಜಮಾಯಿಸಿದ ಕಾರ್ಯಕರ್ತರು, ಪೊಲೀಸರ ಕ್ರಮವನ್ನು ಪ್ರಶ್ನಿಸಿದರು.

ಆಗ ಸ್ಥಳದಲ್ಲಿದ್ದ ಡಿಸಿಪಿ ರಾಹುಲ್ ಕುಮಾರ್ ಹಾಗೂ ಮಹಿಳೆ ನಡುವೆ ಮಾತಿನ ಚಕಮಕಿ ನಡೆಯಿತು. ಕಾರ್ಯಕರ್ತರೇ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.ನಂತರ, ಮಹಿಳೆಯನ್ನು ಒಳಗೆ ಬಿಡಲಾಯಿತು..

6.15– ರಾಜಭವನದಲ್ಲಿ ಯಡಿಯೂರಪ್ಪ ಪ್ರತಿಜ್ಣಾಸ್ವೀಕಾರಕ್ಕೆ ಆಗಮಿಸಿರುವ ಜನ

5.59–ವಿಧಾನಸೌಧದ ಮೂಲಕ ರಾಜಭವನಕ್ಕೆ ಯಡಿಯೂರಪ್ಪ ಪ್ರವೇಶ. ಎಜಿ ಕಚೇರಿ ಮೂಲಕ ಬಂದು, ಹೈಕೋರ್ಟ್ ಬಳಿ ಎಡಕ್ಕೆ ತಿರುಗಿ ರಾಜಭವನ ಪ್ರವೇಶ.ಪ್ರಮಾಣವಚನಕ್ಕೆ ಕ್ಷಣಗಣನೆ ಆರಂಭವಾಗಿದೆ.

5.53– ಮಲ್ಲೇಶ್ವರದ ಬಿಜೆಪಿ ಕಚೇರಿಯಿಂದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಆಯೋಜನೆಯಾಗಿರುವ ರಾಜಭವನದ ಕಡೆ ಯಡಿಯೂರಪ್ಪ . 6.07 ರಿಂದ 6.10ರೊಳಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ

5.45– ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಶಾಸಕ ಮಾಧುಸ್ವಾಮಿ ಮಾತು– ಮಧ್ಯಾಹ್ನ ಉನ್ನತ ಮಟ್ಟದ ಸಭೆ ನಡೆಸಿ ತಿಳಿಸುತ್ತೇವೆ ಎಂದು ಅಮಿತ್‌ ಶಾ ತಿಳಿಸಿದ್ದರು. ಮಸೂದೆ ಮಂಡನೆ ಇದ್ದಿದ್ದರಿಂದ ತಡ ರಾತ್ರಿ ಸಭೆ ನಡೆಸಿ, ಇಂದು ಬೆಳಿಗ್ಗೆ ಯಡಿಯೂರಪ್ಪ ಅವರಿಗೆ ಪ್ರಮಾಣವಚನ ಸ್ವೀಕಾರ ಮಾಡಲು ತಿಳಿಸಿದರು. ಅದನ್ನು ಬಿಟ್ಟು ಏನೂ ನಡೆದಿಲ್ಲ.

ವಿಶ್ವಾಸಮತ ಯಾಚನೆ ಕುರಿತು ಕೇಳಿದ ಪ್ರಶ್ನೆಗೆ–‘ ನನಗೆ ಗೊತ್ತಿರುವ ಶಾಸನ, ಸಂವಿಧಾನದ ಪ್ರಕಾರ ಸಭೆನಲ್ಲಿರುವ ಸದಸ್ಯರಿಗೆ ಬಹುಮತ ಬರಬೇಕು. ಅದರಲ್ಲಿ ನಾವು ಗೆಲುವ ಪಡೆಯುತ್ತೇವೆ. ಹೆರಿಗೆಗೂ ಮೊದಲೇ ಗಂಡೊ, ಹೆಣ್ಣೊ ಎಂದು ಹೇಳಲು ಸಾಧ್ಯವೆ? ಪ್ರತಿಪಕ್ಷದವರು ತಾಳ್ಮೆ ತೆಗೆದುಕೊಳ್ಳಲಿ’– ಮಾಧುಸ್ವಾಮಿ

5.41–ಯಡಿಯೂರಪ್ಪ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಶಾಸಕ ರೋಷನ್ ಬೇಗ್, ಮಾಜಿ ಶಾಸಕ ಕಾಂಗ್ರೆಸ್ ಕೆ.ಎನ್.ರಾಜಣ್ಣ ಭಾಗವಹಿಸಿದ್ದಾರೆ.

5.31–ಮಲ್ಲೇಶ್ವರದ ಬಿಜೆಪಿ ಕಚೇರಿ ಭೇಟಿ ನೀಡಿದ ನಂತರ ಅಲ್ಲಿರುವಕಾಡಮಲ್ಲೇಶ್ವರ ದೇವಸ್ಥಾನ ಭೇಟಿ ಮಾಡಿ ಯಡಿಯೂರಪ್ಪ ಪೂಜೆ ಸಲ್ಲಿಸಿದರು

5.05– ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿಯಡಿಯೂರಪ್ಪ ಮಾತನಾಡಿದರು. ‘ರಾಜಭವನಕ್ಕೆ ಹೋಗಬೇಕು ರಾಜ್ಯಪಾಲರನ್ನು ಭೇಟಿ ಮಾಡಿ, ಇಂದೇ ಪ್ರಮಾಣವಚನ ಸ್ವೀಕರಿಸಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್‌ ಶಾ ತಿಳಿಸಿದರು. ಅದರಂತೆ ನಾನು ಮನವಿ ಮಾಡಿದ್ದೆ.ಇಂದು 6 ಗಂಟೆ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ– ಯಡಿಯೂರಪ್ಪ

‘ಸೇಡಿನ ರಾಜಕಾರಣ ಮಾಡುವುದಿಲ್ಲ. ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ.ಹಿಂದಿನ ಆಡಳಿತಕ್ಕೂ ಈಗಿನ ಆಡಳಿತಕ್ಕೂ ಎಷ್ಟು ವ್ಯತ್ಯಾಸ ಇದೆ ಎನ್ನುವುದುಇನ್ನು 3 ತಿಂಗಳಲ್ಲಿ ಜನರಿಗೆ ತಿಳಿಯಲಿದೆ. ಸಂಜೆ 7ಕ್ಕೆ ಶಾಸಕಾಂಗ ಸಭೆ ಇದೆ. ಕೆಲವು ವಿಷಯ ಚರ್ಚೆ ಮಾಡಿ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ.ರೈತರಿಗೆ, ನಿರಾವರಿಗೆ ಆದ್ಯತೆ ನೀಡುತ್ತೇವೆ’ ಎಂದು ಭರವಸೆ ನೀಡಿದರು.

5.00– ಬೆಂಗಳೂರಿನ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಗೆ ಯಡಿಯೂರಪ್ಪ ಅವರ ಭೇಟಿ

4.59– ನಿಯೋಜಿತ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಪ್ರಯುಕ್ತ ರಾಜಭವನದ ಎದುರು ಭದ್ರತೆ ಬಿಗಿಗೊಳಿಸಲಾಗಿದೆ.

4.30–ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿ.ಎಸ್.ಯಡಿಯೂರಪ್ಪ ಅವರ ಧವಳಗಿರಿ ನಿವಾಸದ ಮುಂಭಾಗ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ.ಸಾವಿರಾರು ಮಂದಿ ಕಾರ್ಯಕರ್ತರು ಜಮಾಯಿಸಿದ್ದು, ಪಟಾಕಿ ಹಚ್ವಿ ಸಂಭ್ರಮಿಸಲು ಸಿದ್ಧತೆ ನಡೆಸಿದ್ದಾರೆ.

3.45–ಜುಲೈ ತಿಂಗಳಲ್ಲಿ ಕುಮಾರಸ್ವಾಮಿ ಅವರು ಹೊರಡಿಸಿರುವ ಕಾಮಗಾರಿ ಹಾಗೂ ವರ್ಗಾವಣೆ ಆದೇಶಗಳಿಗೆ ತಡೆ ಹಿಡಿಯಿರಿ ಎಂದು ಮುಖ್ಯಕಾರ್ಯದರ್ಶಿ ವಿಜಯ ಬಾಸ್ಕರ್‌ ಅವರಿಗೆ ನಿಯೋಜಿತ ಮುಖ್ಯಮಂತ್ರಿಯಡಿಯೂರಪ್ಪ ಅವರು ಪತ್ರ ಬರೆದಿದ್ದಾರೆ.

3.29–ಒಂದು ತಿಂಗಳ ರಾಜಕೀಯ ಒತ್ತಡಕ್ಕೆ ಒಳಗಾಗಿದ್ದ ಎಚ್‌.ಡಿ. ಕುಮಾರಸ್ವಾಮಿ, ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಶುಕ್ರವಾರ ಮಧ್ಯಾಹ್ನ ವೈದ್ಯ ಮಂಜುನಾಥ್‌ ಅವರ ಮನೆಗೆ ಭೇಟಿ ನೀಡಿದರು.

3.26–ಬಿಜೆಪಿಗೆ ಈಗ ಕೇವಲ 105 ಶಾಸಕರ ಸಂಖ್ಯ ಬಲವಷ್ಟೇ ಇದೆ. ಉಳಿದ 6 ಜನರಿಗೆ ಅವರು ಏನು ಮಾಡುತ್ತಾರೆ– ಪ್ರಿಯಾಂಕ್‌ ಖರ್ಗೆ ಟ್ವೀಟ್‌

3.05–ಜನ ಮೆಚ್ಚುವ ರೀತಿಯಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ಸರ್ಕಾರ ನಡೆಸಬೇಕು ಎನ್ನುವುದು ನಮ್ಮ ಆಶಯವಾಗಿದೆ. ಆಷಾಡ ಶುಕ್ರವಾರ ಬಹಳ ಶುಭದಿನದಂದು ಪ್ರಮಾಣವಚನ ನಡೆಯುತ್ತಿರುವು ನಮಗೆಲ್ಲ ಸಂತೋಷ ತಂದಿದೆ.ಬಹುಮತ ಸಾಬೀತಾದ ನಂತರ ರಾಷ್ಟ್ರೀಯ ನಾಯಕರು ತೀರ್ಮಾನದಂತೆ ಸಚಿವ ಸಂಪುಟ ರಚಿಸಲಾಗಿವುದು – ಯಲಹಂಕ ಶಾಸಕ ಎಸ್.ಆರ್‌.ವಿಶ್ವನಾಥ್

3.03 - ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ತೆರಳದಂತೆ ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷದಿನೇಶ್‌ ಗುಂಡೂರಾವ್‌ ಸೂಚನೆ.

3.01– ಯಡಿಯೂರಪ್ಪ ಅವರು ಸಂಜೆ5ಕ್ಕೆ ಬಿಜೆಪಿ ಕಚೇರಿ ಭೇಟಿ ನಂತರ ಪ್ರಮಾಣ ವಚನ ಸ್ವೀಕರಿಸುತ್ತಾರೆ. 14 ತಿಂಗಳು ಸರ್ಕಾರ ಇತ್ತೋ ಇಲ್ಲವೊ ಎಂದು ಆಗಿತ್ತು.ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಹೆಚ್ಚು ಜನೋಪಯೋಗಿ ಕೆಲಸಗಳನ್ನು ಮಾಡಬಹುದು. ಈ ಹಿಂದೆ ತಂದೆ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಯುಪಿಎ ಸರ್ಕಾರವಿತ್ತು. ಆದರೆ, ಈಗ ಹಾಗಾಗುವುದಿಲ್ಲ.ರೈತರಿಗೆ, ಶೋಷಿತರಿಗೆ ಒಳ್ಳೆಯ ದಿನಗಳು ಕಾದಿವೆ ಎನ್ನಬಹುದು–ಬಿ.ವೈ. ರಾಘವೇಂದ್ರ

ಯಡಿಯೂರಪ್ಪಗೆ ಸಂತೋಷ್ಅಭಿನಂದನೆ

‘ಕರ್ನಾಟಕ ರಾಜ್ಯವು ವಿಕಾಸ ಯಾತ್ರೆಯ ಹೊಸ ಯುಗಕ್ಕೆ ಸಾಕ್ಷಿಯಾಗಲಿದೆ. ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಸಂಜೆ 6ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಸಂಜೆ 5ಕ್ಕೆ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಭಿನಂದನೆಗಳು ಯಡಿಯೂರಪ್ಪ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ಮಾಡಿದ್ದಾರೆ.

ಯಡಿಯೂರಪ್ಪಗೆ ಶುಭ ಕೋರಿದ ಪರಮೇಶ್ವರ

2.20– ‘ಸಂಖ್ಯಾಬಲದ ಆಧಾರದ ಮೇಲೆ ನಮ್ಮ ಸರ್ಕಾರ ಬಿದ್ದು ಹೋಗಿದೆ. ಯಡಿಯೂರಪ್ಪ ಅವರಿಗೆ ಅವರ ಪಕ್ಷ ಮತ್ತೊಂದು ಅವಕಾಶ ಕೊಟ್ಟಿದೆ. ಒಳ್ಳೇದಾಗಲಿ, ಅವರಿಗೆ ಶುಭ ಕೋರುತ್ತೇನೆ’ ಎಂದು ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ ಹೇಳಿದರು.

ಪ್ರಮಾಣ ವಚನಕ್ಕೂ ಮೊದಲು ಯೋಧರಿಗೆ ಬಿಎಸ್‌ವೈ ನಮನ

01:00– ಕಾರ್ಗಿಲ್ ವಿಜಯಕ್ಕೆ 20 ವರ್ಷಗಳಾದ ಹಿನ್ನೆಲೆಯಲ್ಲಿ ಹುತಾತ್ಮಯೋಧರಿಗೆಬೆಂಗಳೂರಿನಲ್ಲಿ ಯಡಿಯೂರಪ್ಪ ನಮನ ಸಲ್ಲಿಸಿದರು. ‘ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಯೋಧರಿಗೆ ನಮನ ಸಲ್ಲಿಸಲೆಂದು ಇಲ್ಲಿಗೆ ಬಂದಿದ್ದೇನೆ. ಇಂದಿಗೆ 20 ವರ್ಷಗಳ ಹಿಂದೆ, ನಮ್ಮ ಸಶಸ್ತ್ರಪಡೆಗಳು ಪಾಕಿಸ್ತಾನವನ್ನು ಸೋಲಿಸಿದ್ದವು.ರಣಭೂಮಿಯಲ್ಲಿ ಹೋರಾಡಿದ ಎಲ್ಲ ಯೋಧರಿಗೆ ನಾನು ಗೌರವ ಸಲ್ಲಿಸುತ್ತೇನೆ’ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯಪಾಲರದು ಪ್ರಜಾಪ್ರಭುತ್ವ ವಿರೋಧಿ ನಿರ್ಧಾರ: ಜೆಡಿಎಸ್ ಟೀಕೆ

12.50– ಯಡಿಯೂರಪ್ಪ ಅವರ ಕೋರಿಕೆಗೆ ರಾಜ್ಯಪಾಲರು ಯಾವುದೇ ಅನುಮಾನ ವ್ಯಕ್ತಪಡಿಸಿದೇ ಅನುಮತಿ ನೀಡಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಿರ್ಧಾರ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

‘ಇದು ಕರ್ನಾಟಕದ ಕರಾಳ ದಿನ. ಬಿಜೆಪಿಯ ಅಸಂವಿಧಾನಿಕ ಕ್ರಮಗಳಿಂದಾಗಿಪ್ರಜಾಪ್ರಭುತ್ವ ನಿಧಾನವಾಗಿ ಸಾಯುತ್ತಿದೆ’ ಎಂದು ಜೆಡಿಎಸ್ ಆಕ್ಷೇಪಿಸಿದೆ.

ದೇವರು ಮತ್ತೊಮ್ಮೆ ಅವಕಾಶ ಕೊಟ್ಟಿದ್ದಾನೆ: ಮಾಧುಸ್ವಾಮಿ

12.46– ನಮ್ಮ ಬಹಳ ದಿನಗಳ ಕನಸು ಈಗ ಈಡೇರುತ್ತಿದೆ. ಯಡಿಯೂರಪ್ಪ ಅವರು ಹಿಂದೆ ನಿರ್ಗಮಿಸಿದ್ದ ರೀತಿ ನೋವುಂಟು ಮಾಡಿತ್ತು. ದೇವರು ಈಗ ಮತ್ತೊಮ್ಮೆ ಅವಕಾಶ ಕೊಟ್ಟಿದ್ದಾನೆ. ಯಡಿಯೂರಪ್ಪ ಅವರಿಂದ ಒಳ್ಳೇ ಕೆಲಸ ಮಾಡಿಸ್ತೀವಿ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಪ್ರಮಾಣ ವಚನಕ್ಕೆ ಹಿರಿಯ ನಾಯಕರು

12.40–ರಾಜಭವನದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವ ಬಿ.ಎಸ್.ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಇತರ ಹಿರಿಯ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯನ್ನು ಬಿಜೆಪಿ ರಾಜ್ಯ ಘಟಕ ಹೊಂದಿದೆ. ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರಸುಮಾರು 3 ಸಾವಿರ ಅಭಿಮಾನಿಗಳೂ ಭಾಗವಹಿಸಬಹುದು ಎನ್ನಲಾಗಿದೆ.

ಮುಖ್ಯಮಂತ್ರಿಯಾಗಿ ಇಂದು ಯಡಿಯೂರಪ್ಪ ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ನಾಯಕರ ಜೊತೆಗೆ ಸಮಾಲೋಚಿಸಿಸಂಪುಟ ರಚಿಸಲಾಗುವುದು. ಪಕ್ಷೇತರ ಸದಸ್ಯನಾಗೇಶ್ಅವರೂ ಬಿಜೆಪಿಯನ್ನೇ ಬೆಂಬಲಿಸಬಹುದು ಎನ್ನುವ ನಿರೀಕ್ಷೆಯನ್ನು ಬಿಜೆಪಿ ನಾಯಕರು ಇಟ್ಟುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.

ಸ್ಪೀಕರ್‌ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಏನು ಕೆಲಸ? ಬಿಜೆಪಿ ಪ್ರಶ್ನೆ

12.30– ಶಾಸಕರ ಅನರ್ಹತೆ ಬಗ್ಗೆ ದೂರು ಸಲ್ಲಿಸಿದ ಕಾಂಗ್ರೆಸ್‌ನ ಉಗ್ರಪ್ಪ, ಅಶೋಕ್ ಪಟ್ಟಣ್,ರಾಥೋಡ್ ಅವರುನಿನ್ನೆಸ್ಪೀಕರ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಏಕೆ ಪಾಲ್ಗೊಂಡಿದ್ದರು ಎಂದು ಬಿಜೆಪಿ ಪ್ರಶ್ನಿಸಿದೆ.ರಾತ್ರಿ7.45ಕ್ಕೆ ವಿಧಾನಸೌಧದಲ್ಲಿ ಇವರಿಗೇನು ಕೆಲಸವಿತ್ತು? ಸ್ಪೀಕರ್ ಆಹ್ವಾನ ಕೊಟ್ಟಿದ್ದು ಮಾಧ್ಯಮಕ್ಕೆ ಮಾತ್ರ ಅಲ್ಲವೇ ಎಂದು ಬಿಜೆಪಿ ಕೇಳಿದೆ. ದೂರುದಾರ ನ್ಯಾಯಾಧೀಶರ ಜೊತೆಗೆ ಬಂದು ಹೋಗುವ ಪದ್ಧತಿ ಇದೆಯೇ? ಎಂದು ಬಿಜೆಪಿ ಮುಖಂಡ ಮಂಜುನಾಥ ಕನ್ಯಾಡಿ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಆಕ್ಷೇಪವಿಲ್ಲ ಎಂದ ಡಿಕೆಶಿ

12.15–‘ಯಡಿಯೂರಪ್ಪ ವಿಶ್ವಾಸಮತಕ್ಕೆ ನಮ್ಮ ಆಕ್ಷೇಪವಿಲ್ಲ’ ಎಂದು ನವದೆಹಲಿಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ‘ಯಡಿಯೂರಪ್ಪ ಯಾವ ದಾಳ ಇಟ್ಟುಕೊಂಡಿದ್ದಾರೋ ನಮಗೆ ಗೊತ್ತಿಲ್ಲ. ನಮ್ಮನ್ನು ಅಧಿಕಾರದಿಂದ ಇಳಿಸಿದ್ದಾಗಿದೆ. ಮುಂದೆ ಏನು ಮಾಡುತ್ತಾರೋ ‌ನೋಡೋಣ. ಜುಲೈ 31ರೊಳಗೆ ಹಣಕಾಸು ಮಸೂದೆ ಪಾಸಾಗಬೇಕಿದೆ. ಕಾಂಗ್ರೆಸ್ ಅದಕ್ಕೆ ಅಡ್ಡಿಪಡಿಸಲ್ಲ.‌ ಯಡಿಯೂರಪ್ಪ ಅತೃಪ್ತ ಶಾಸಕರಿಗೆ‌ ಸಹ ತಮ್ಮ ಜತೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಏನು ಮಾಡುತ್ತಾರೋ ನೋಡೋಣ ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.

11.36– ಯಡಿಯೂರಪ್ಪ ಪ್ರಮಾಣ ವಚನಕ್ಕೆ ಗೈರು‌ ಹಾಜರಾಗಲು ಉಸ್ತುವಾರಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಿರ್ಧಾರ.

11.20– ಬಿಜೆಪಿಗೆ ಸಂಖ್ಯಾಬಲ ಇಲ್ಲ: ಕಾಂಗ್ರೆಸ್ ಆಕ್ಷೇಪ

‘ಬಿಜೆಪಿಗೆ ಸಂಖ್ಯಾಬಲ ಇಲ್ಲದ ಕಾರಣ ಯಾವುದೇ ಕಾರಣಕ್ಕೂ ಹಕ್ಕು ಮಂಡನೆಯಾಗಲಿ ಅಥವಾ ಪ್ರಮಾಣ ವಚನವಾಗಲಿಸ್ವೀಕರಿಸಲು ಸಾಧ್ಯವೇ ಇಲ್ಲ’ ಎಂದು ಕಾಂಗ್ರೆಸ್ ಟ್ವಿಟರ್‌ನಲ್ಲಿಆಕ್ಷೇಪಿಸಿದೆ. ‘ಯಡಿಯೂರಪ್ಪ ಅವರುಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲಭೂತ ಹಾಗೂ ಸಾಮಾನ್ಯ ಜ್ಞಾನ ಹೊಂದುವುದು ಅವಶ್ಯಕ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಯಡಿಯೂರಪ್ಪ–ಅಮಿತ್ ಶಾ ನಡುವೆ ಏನೆಲ್ಲಾ ಮಾತುಕತೆ ನಡೆಯಿತು

11.10– ಸರ್ಕಾರ ರಚನೆ ಅವಕಾಶ ಕಳೆದುಕೊಂಡರೆ, ಮುಂದೆ ಕಷ್ಟ ಆಗಬಹುದು ಎಂದುಯಡಿಯೂರಪ್ಪ ಹೇಳಿದ್ದಾರೆ. ಇಂದಿನ ಸ್ಥಿತಿಯಲ್ಲಿ ಪೂರ್ಣ ಮನಸ್ಸಿಲ್ಲದಿದ್ದರೂ ಬೇರೆ ಮಾರ್ಗ ಇಲ್ಲದೆ ಶಾ ಒಪ್ಪಿಗೆ ನೀಡಿದ್ದಾರೆ. ಕಾಂಗ್ರೆಸ್ ಮತ್ತೆ ಸರ್ಕಾರ ರಚನೆ ಯತ್ನ ನಡೆಸಬಹುದು ಎಂಬ ಸುಳಿವು ಸಿಕ್ಕಿತ್ತು.ಬಿಜೆಪಿ ಸರ್ಕಾರ ರಚನೆ ಮಾಡದೇ ಇದ್ದರೆ, ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್ ಪಾಳಯಕ್ಕೆ ಹೋದರೆ, ಸರ್ಕಾರ ರಚನೆ ಅವಕಾಶ ತಪ್ಪಿದಂತೆ ಆಗುತ್ತದೆ.ಯಡಿಯೂರಪ್ಪ ಅವರಿಗೆ ಅವಕಾಶ ತಪ್ಪಿಸಿದ ಆರೋಪವೂ ಬರುತ್ತದೆ ಎಂಬ ಕಾರಣಕ್ಕೆ ಶಾ ಒಪ್ಪಿಗೆ ನೀಡಿದರು ಎಂದು ಮೂಲಗಳು ಹೇಳಿವೆ.

11.00– ಬಿಎಸ್‌ವೈಜತೆ ನಿನ್ನೆ ರಾತ್ರಿ ಚರ್ಚೆ ನಡೆಸಿದ ಶಾ, ನಿಮ್ಮ ಜವಾಬ್ದಾರಿಯಲ್ಲಿ ಸರ್ಕಾರ ರಚಿಸಲು ಸಾಧ್ಯವೇ?ರಿಸ್ಕ್ ಪೂರ್ತಿ ನೀವೇ ತೆಗೆದುಕೊಳ್ಳುವಿರಾ? ಎಂದು ಪ್ರಶ್ನಿಸಿದರು ಎಂದು ತಿಳಿದುಬಂದಿದೆ.‘ಆ ವಿಚಾರ ನನಗೆ ಬಿಡಿ, ನೀವು ಗ್ರೀನ್ ಸಿಗ್ನಲ್ ಕೊಡಿ’ ಎಂದು ಯಡಿಯೂರಪ್ಪ ಮನವಿ ಮಾಡಿದರು ಎಂದು ಹೇಳಲಾಗಿದೆ.‘ಮುಂಜಾನೆ ಕರೆ ಮಾಡುತ್ತೇನೆ’ ಎಂದು ಹೇಳಿದ್ದ ಅಮಿತ್‌ ಶಾ,ನಸುಕಿನ 5 ಗಂಟೆಗೆ ಕರೆ ಮಾಡಿ, ‘ನಿಮಗೆ ವಿಶ್ವಾಸ ಇದ್ದರೆ ಸರ್ಕಾರ ರಚನೆಮಾಡಿ. ಅಗತ್ಯ ಸೂಚನೆ ನೀಡುತ್ತೇನೆ’ ಎಂದು ಭರವಸೆ ನೀಡಿದರು ಎಂದು ಬಿಜೆಪಿ ಮೂಲಗಳು ಹೇಳಿವೆ.

ಬಿ.ಎಸ್. ಯಡಿಯೂರಪ್ಪ ಅವರು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಮತ್ತು ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅನುಮತಿ ಕೋರಿದರು. ಈ ಸಂದರ್ಭ ಬಿಜೆಪಿ ಶಾಸಕರು ಉಪಸ್ಥಿತರಿದ್ದರು.
ಬಿ.ಎಸ್. ಯಡಿಯೂರಪ್ಪ ಅವರು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಮತ್ತು ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅನುಮತಿ ಕೋರಿದರು. ಈ ಸಂದರ್ಭ ಬಿಜೆಪಿ ಶಾಸಕರು ಉಪಸ್ಥಿತರಿದ್ದರು.

10.45– ಈಗಷ್ಟೇ ನಾನು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅನುಮತಿ ನೀಡಬೇಕು ಎಂದು ಕೋರಿದೆ.ಅವರು ಲಿಖಿತ ಅನುಮತಿ ನೀಡಿದ್ದಾರೆ. ಸಂಜೆ 6ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಎಲ್ಲಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರು ಬರಬೇಕು ಅಂತ ವಿನಂತಿ ಮಾಡ್ತೀನಿ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಿಗೆ ವೈಯಕ್ತಿಕವಾಗಿ ಆಹ್ವಾನ ಪತ್ರ ಬರೆಯುತ್ತೇನೆ.ದೂರವಾಣಿ ಮೂಲಕವೂ ಸಂಪರ್ಕಿಸುತ್ತೇನೆ ಎಂದುಯಡಿಯೂರಪ್ಪ ಹೇಳಿದರು.

10.43– ಇಂದು ಸಂಜೆ 6ರಿಂದ 6.15ರ ನಡುವೆ ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡ್ತೀನಿ. ರಾಜ್ಯಪಾಲರು ಲಿಖಿತ ಅನುಮತಿ ನೀಡಿದ್ದಾರೆ.

ರಾಜಭವನದ ಎದುರು ರಾಜ್ಯಪಾಲರ ಅನುಮತಿ ಪತ್ರ ಕೈಲಿ ಹಿಡಿದು ಮಾತನಾಡಿದ ಯಡಿಯೂರಪ್ಪ
ರಾಜಭವನದ ಎದುರು ರಾಜ್ಯಪಾಲರ ಅನುಮತಿ ಪತ್ರ ಕೈಲಿ ಹಿಡಿದು ಮಾತನಾಡಿದ ಯಡಿಯೂರಪ್ಪ

10.29–ದೆಹಲಿಯಲ್ಲಿ ಬೀಡು ಬಿಟ್ಟಿರುವ ಬಿಜೆಪಿ ನಿಯೋಗಕ್ಕೂ ಸುಳಿವು ನೀಡದ ಶಾ, ಶೆಟ್ಟರ್ ಮತ್ತು ಸಂಗಾತಿಗಳಿಗೂ ಶಾ ನಡೆಯ ಮಾಹಿತಿ ಇರಲಿಲ್ಲ.

10.20– ಯಡಿಯೂರಪ್ಪ6.30ರಿಂದ 7.30ರ ಶುಭಲಗ್ನದಲ್ಲಿ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ.

10.18– ಸಂಜೆ 6ಕ್ಕೆಪ್ರಮಾಣ ವಚನ ಸ್ವೀಕರಿಸಲುರಾಜ್ಯಪಾಲರಿಗೆ ಮನವಿ ಮಾಡಿದರು.

10.14–ರಾಜ್ಯಪಾಲರನ್ನು ಭೇಟಿಯಾಗಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಯಡಿಯೂರಪ್ಪ

10.08–ರಾಜಭವನ ತಲುಪಿದ ಯಡಿಯೂರಪ್ಪ

ರಾಜಭವನದ ಎದುರು ಕಿಕ್ಕಿರಿದ ಮಾಧ್ಯಮಗಳು
ರಾಜಭವನದ ಎದುರು ಕಿಕ್ಕಿರಿದ ಮಾಧ್ಯಮಗಳು

ರಾಜ್ಯಪಾಲರ ಭೇಟಿಗೆ ಯಡಿಯೂರಪ್ಪನಿರ್ಧಾರ

10.00–ಡಾಲರ್ಸ್‌ ಕಾಲೊನಿಯ ತಮ್ಮ ನಿವಾಸದ ಸಮೀಪಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ,ನಾನು ಈಗಾಗಲೇ ವಿರೋಧಪಕ್ಷದ ನಾಯಕನಾಗಿದ್ದೇನೆ. ಹೀಗಾಗಿ ಹೊಸದಾಗಿ ಮತ್ತೊಮ್ಮೆ ಶಾಸಕಾಂಗ ಪಕ್ಷದ ಸಭೆ ನಡೆಸುವ ಅಗತ್ಯವಿಲ್ಲ. ಬೆಳಿಗ್ಗೆ 10ಕ್ಕೆ ರಾಜ್ಯಪಾಲರನ್ನು ಭೇಟಿಯಾಗಿ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಬೇಕು ಎಂದು ಕೋರುತ್ತೇನೆ ಎಂದುಹೇಳಿದರು.

ಸರ್ಕಾರ ರಚನೆ ಹಕ್ಕು ಮಂಡಿಸಲು ದೂರವಾಣಿ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ನಂತರ ತರಾತುರಿಯಲ್ಲಿ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾ‌ಜಭವನದತ್ತ ನಡೆದರು.

ತಮ್ಮ ಮನೆಯಿಂದ ಆಂಜನೇಯ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ, ರಾಜಭವನದತ್ತ ಯಡಿಯೂರಪ್ಪ ಹೊರಟರು.ಇಂದು ಮಧ್ಯಾಹ್ನ 12.30ಕ್ಕೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಬಹುದು ಎಂಬ ಮಾತುಬಿಜೆಪಿ ವಲಯದಲ್ಲಿ ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT